ಹೊಸಪೇಟೆಯಲ್ಲಿ ತಲೆಎತ್ತಲಿದೆ ಹಂಪಿ ವೈಭವದ ರಂಗಮಂದಿರ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ ಚಾಲನೆ!

ಕೇಂದ್ರ ವಿತ್ತ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಿಗ್ಗೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಟಿ.ಬಿ. ಡ್ಯಾಮ್ ರಸ್ತೆಯ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನೂತನವಾಗಿ ನಿರ್ಮಾಣವಾಗಲಿರುವ “ವಿಜಯನಗರ ಜಿಲ್ಲಾ ಸಾಂಸ್ಕೃತಿಕ ಕೇಂದ್ರ” (ರಂಗಮಂದಿರ)ಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ರಾಜ್ಯ ಪ್ರವಾಸದ ಭಾಗವಾಗಿ ಜಿಲ್ಲೆಗೆ ಆಗಮಿಸಿದ್ದ ಸಚಿವರು ಭೂಮಿ ಪೂಜೆ ನೆರವೇರಿಸಿದ ಬಳಿಕ, ರಂಗಮಂದಿರದ ಪ್ರಧಾನ ವಾಸ್ತುಶಿಲ್ಪ ವಿನ್ಯಾಸಕಾರರಾದ ಅವಿನಾಶ್ ಜೈನ್ ಅವರಿಂದ ಯೋಜನೆಯ ನೀಲನಕ್ಷೆ ಹಾಗೂ ವಿನ್ಯಾಸದ ಕುರಿತು ಮಾಹಿತಿ ಪಡೆದರು. ಸಂಸದರ ಅನುದಾನದಡಿ …

Read more