ಜೀರಿಗೆ ಸಾರು

 

ಜೀರಿಗೆ ಸಾರು ಮಾಡುವ ವಿಧಾನ

 

ಬೇಕಾಗಿರುವ ಸಾಮಗ್ರಿಗಳು

* ಜೀರಿಗೆ ಎರಡು ಸ್ಪೂನ್

* ಕಾಳು ಮೆಣಸು ಒಂದು ಸ್ಪೂನ್

* ಬ್ಯಾಡಗಿ ಅಥವಾ ಗುಂಟೂರು ಮೆಣಸಿನಕಾಯಿ ಐದರಿಂದ ಆರು

* ಕರಿಬೇವಿನ ಎಲೆ ಸ್ವಲ್ಪ

* ಅರಿಶಿನ ಪುಡಿ ಅರ್ಧ ಸ್ಪೂನ್

* ಬೆಳ್ಳುಳ್ಳಿ ಎರಡು ಗಡ್ಡೆ

* ಒಣಕೊಬ್ಬರಿ 4 ಸ್ಪೂನ್

* ನೆನೆಸಿದ ಅಕ್ಕಿ ಒಂದು ಸ್ಪೂನ್

*ಮಾಡುವ ವಿಧಾನ;

ಮೊದಲಿಗೆ ಒಂದು ಬಾಣಲೆಯಲ್ಲಿ ಒಂದು ಸ್ಪೂನ್ ಎಣ್ಣೆ ಹಾಕಿ ಮೇಲೆ ತಿಳಿಸಿರುವ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಹುರಿದುಕೊಳ್ಳಿ ನಂತರ ಮಿಕ್ಸಿ ಜಾರಿಗೆ ಎಲ್ಲಾ ಪದಾರ್ಥಗಳನ್ನು ಹಾಕಿ ನೆನೆಸಿಟ್ಟಿರುವ ಅಕ್ಕಿಯನ್ನು ಹಾಕಿಕೊಂಡು ಚೆನ್ನಾಗಿ ಪೇಸ್ಟ್ ತಯಾರಿಸಿಕೊಳ್ಳಿ ನಂತರ ಒಗ್ಗರಣೆಗೆ ಒಂದು ಪ್ಯಾನ್ ನಲ್ಲಿ ಒಂದು ಸ್ಪೂನ್ ಎಣ್ಣೆ,ಸಾಸಿವೆ,ಕರಿಬೇವಿನ ಎಲೆ ಬೆಳ್ಳುಳ್ಳಿ, ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಕೊಟ್ಟುಕೊಳ್ಳಿ ನಂತರ ಇದಕ್ಕೆ ರುಬ್ಬಿರುವ ಮಸಾಲೆಯನ್ನು ಹಾಕಿ ಅದಕ್ಕೆ ಬೇಕಾಗಿರುವ ನೀರನ್ನು ಸೇರಿಸಿ ಜೊತೆಗೆ ಹುಣಸೆ ಹುಳಿ, ಉಪ್ಪು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ ಈಗ ನಿಮ್ಮ ಜೀರಿಗೆ ಸಾರು ರೆಡಿ